ಓ-ಹೆನ್ರಿ ಕಥೆಗಳು

144.00

ಓ-ಹೆನ್ರಿ ಕಥೆಗಳು :

ವಿಲಿಯಂ ಸಿಡ್ನೆ ಪೋರ್ಟರ್ (1862-1910) ಅಮೇರಿಕೆಯ ಅತ್ಯಂತ ಪ್ರಸಿದ್ಧ ಸಣ್ಣ ಕಥೆಗಳ ಲೇಖಕ. ಅವನ ಕಾವ್ಯನಾಮ ಓ-ಹೆನ್ರಿ. ಆತ ಆರುನೂರಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ ಪ್ರತಿಭಾವಂತ. ಅವನು ಹಣದ ದುರುಪಯೋಗ ಮಾಡಿದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಕಥೆಗಳನ್ನು ಬರೆಯಲು ಪ್ರಾರಂಭಿಸಿದ. ಓ-ಹೆನ್ರಿಯ ಕಥೆಗಳ ವಿಶೇಷತೆ ಹಾಗೂ ಹೆಗ್ಗುರುತೆಂದರೆ ಅವುಗಳ ಆಶ್ಚರ್ಯಕರವಾದ ಅಂತ್ಯ. ಅವನ ಕಥೆಗಳಲ್ಲಿ ಕಂಡುಬರುವ ಅನಿರೀಕ್ಷಿತ ಬದಲಾವಣೆಗಳು ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತವೆ. ಓ-ಹೆನ್ರಿಯ ಕಥೆಗಳು ಅಮೇರಿಕೆಯ ಸಾಮಾನ್ಯ ಹಾಗೂ ಅತಿಸಾಮಾನ್ಯ ಜನರ ಅಪೇಕ್ಷೆಗಳನ್ನು, ಆಕಾಂಕ್ಷೆಗಳನ್ನು, ಹತಾಶೆಗಳನ್ನು, ಸಂಭ್ರಮಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತವೆ. ಪ್ರತಿಯೊಂದು ಕಥೆಯೂ ಮನುಷ್ಯ ಸ್ವಭಾವದ ಒಳನೋಟಗಳನ್ನು ನೀಡುತ್ತ, ಆ ಸ್ವಭಾವ, ಬದುಕಿನ ಅನಿವಾರ್ಯ ಹೋರಾಟಗಳ ಫಲಶೃತಿಗಳಾದ ಪ್ರೀತಿ, ದ್ವೇಷ, ಬಡತನ, ಆತ್ಮಗೌರವ, ಮೋಸ, ಅಪರಾಧಗಳಿಂದ ಬದಲಾಗುವುದನ್ನು ಹೃದಯಕ್ಕೆ ಮುಟ್ಟುವಂತೆ ತಲುಪಿಸುತ್ತದೆ. ಈ ಕಥಾಸಂಕಲನದಲ್ಲಿ ಓ ಹೆನ್ರಿಯ ಪ್ರಾತಿನಿಧಿಕ ಇಪ್ಪತ್ತು ಅನುವಾದಿತ ಕಥೆಗಳಿವೆ.

Additional information

Author

Gururaj Karajagi

Language

Kannada

Category

Stories

Reviews

There are no reviews yet.

Only logged in customers who have purchased this product may leave a review.