ಮೊಲೆವಾಲು ನಂಜಾಗಿ

135.00

ಮೊಲೆವಾಲು ನಂಜಾಗಿ

ಕತೆಗಳು

ಶ್ರೀ ಮಲ್ಲಿಕಾರ್ಜುನ ಹಿರೇಮಠ

‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ.

Additional information

Author

Mallikarjun Hiremath

Language

Kannada

Category

Stories

Reviews

There are no reviews yet.

Only logged in customers who have purchased this product may leave a review.