ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು

157.00

ಭಾಷಾಂತರ : ಸೈದ್ಧಾಂತಿಕ ಹಾಗು ಆನ್ವಯಿಕ ನೆಲೆಗಳು ನಾನು ಆರೇಳು ವರ್ಷಗಳ ಕೆಳಗೇ ಬರೆಯಬೇಕೆಂದುಕೊಂಡಿದ್ದ ಕೃತಿ; ಆ ಕನಸು ಈಗ ನನಸಾಗುತ್ತಿರುವುದು ನನಗೆ ತುಂಬಾ ಹರ್ಷದ ಸಂಗತಿ. ಮುಂದುವರೆಯುವ ಮೊದಲು ಈ ಪುಸ್ತಕದ ಮಿತಿಯನ್ನೂ ನಾನು ಒಪ್ಪಿಕೊಳ್ಳಬೇಕು: ಕಳೆದ ಎರಡು-ಮೂರು ದಶಕಗಳಲ್ಲಿ ಪಾಶ್ಚಿಮಾತ್ಯ-ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಭಾಷಾಂತರವನ್ನು ಕುರಿತು ಅಗಾಧ ಚಿಂತನೆ ನಡೆದಿದೆ; ಭಾಷಾಶಾಸ್ತ್ರೀಯ, ವಸಾಹತೋತ್ತರ, ಸ್ತ್ರೀವಾದಿ, ಜಾನಾಂಗಿಕ, ಇತ್ಯಾದಿ ನೆಲೆಗಳಲ್ಲಿ ಭಾಷಾಂತರಕ್ರಿಯೆಯ ಸ್ವರೂಪ ಹಾಗೂ ಪರಿಣಾಮಗಳನ್ನು ಕುರಿತು ಅನೇಕ ಸ್ವೋಪಜ್ಞ ಸಿದ್ಧಾಂತಗಳು ಮೂಡಿ ಬಂದಿವೆ. ಅವುಗಳಲ್ಲಿ, ನನಗೆ ಮಹತ್ವಪೂರ್ಣವೆಂದು ತೋರಿದ, ಕೆಲವು ಸೈದ್ಧಾಂತಿಕ ಧಾರೆಗಳನ್ನು ಮಾತ್ರ ಇಲ್ಲಿ ಪರಿಚಯಿಸಿದ್ದೇನೆ. ಭಾಷಾಂತರಕ್ರಿಯೆಯನ್ನು ಕುರಿತು ನನ್ನ ನಿಲುವು ಈ ಕೃತಿಯ ಎರಡನೆಯ ಭಾಗದ ಲೇಖನಗಳಲ್ಲಿ ಸ್ಪಷ್ಟವಾಗುವುದರಿಂದ, ಭಿನ್ನ ಭಿನ್ನ ಸೈದ್ಧಾಂತಿಕ ನೆಲೆಗಳನ್ನು ವಿವರಿಸುವಾಗ ಸಾಧ್ಯವಿದ್ದಷ್ಟೂ ವಸ್ತುನಿಷ್ಠವಾಗಿರಲು ಪ್ರಯತ್ನಿಸಿದ್ದೇನೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ : ಮೊದಲ ಭಾಗದಲ್ಲಿ ಭಿನ್ನ ಸಿದ್ಧಾಂತಗಳ ಪರಿಚಯಾತ್ಮಕ ವ್ಯಾಖ್ಯಾನವಿದ್ದರೆ ಎರಡನೆಯ ಭಾಗದಲ್ಲಿ ಆಗಾಗ ಈ ವಿಷಯವನ್ನು ಕುರಿತು ಪ್ರಕಟವಾಗಿರುವ ನನ್ನ ಆನ್ವಯಿಕ ಲೇಖನಗಳಿವೆ.
ಸಿ. ಎನ್. ರಾಮಚಂದ್ರನ್

Additional information

Author

C.N.Ramachandran

Language

Kannada

Category

Critical Books

Reviews

There are no reviews yet.

Only logged in customers who have purchased this product may leave a review.