ಶ್ರೀಮತಿ ವೈದೇಹಿ ಅವರು ಸೇಡಿಯಾಪು ಕೃಷ್ಣಭಟ್ಟ ಅವರ ನೆನಪುಗಳನ್ನು ಅವರ ಜೀವನದ ಸಂಧ್ಯೆಯಲ್ಲಿ ಸಂಗ್ರಹಿಸಿದ್ದಾರೆ. ಕಣ್ಣಿನ ದೃಷ್ಟಿಶಕ್ತಿ ಸಂಪೂರ್ಣ ಉಡುಗಿ, ಶಾರಿರಿಕವಾಗಿ ಪೂರ್ತಿ ನಿಶ್ಯಕ್ತರಾಗಿದ್ದ ಸೇಡಿಯಾಪು ಅವರು ತಮ್ಮ ಬದುಕಿನ ತೀರಾ ಕೊನೆಯ ವರ್ಷದಲ್ಲಿ ಹೀಳಿದ ಬದಿಕಿನ ಘಟನೆಗಳನ್ನು ವೈದೇಹಿ ಇಲ್ಲಿ ಯಥಾವತ್ತಾಗಿ ಸಂಗ್ರಹಿಸಿ ಕನ್ನಡ ಜನತೆಗೆ ನೀಡಿದ್ದಾರೆ. ಸೇಡಿಯಾಪು ಕೃಷ್ಣಭಟ್ಟರ ಹಾಸ್ಯಪ್ರಜ್ಞೆ, ವಿದ್ವಾಂಸರ ಜಿಗುಟತನ, ಸತ್ಯನಿಷ್ಠುರತೆ ಈ ನೆನಪುಗಳಲ್ಲಿ ಹರಳುಗಟ್ಟಿವೆ.
ಸೇಡಿಯಾಪು ನೆನಪುಗಳು
₹99.00
ಈ ಪುಸ್ತಕವು ಪಂಡಿತ ಸೇಡಿಯಾಪು ಕೃಷ್ಣ ಭಟ್ಟ ಅವರ ಜೀವನದ ಅತೀ ಸಂಕ್ಷಪ್ತ ದೃಶ್ಯ ಸಾಗರದ ಬದಲು ಹನಿ ಮಾತ್ರ ಆದರೆ ಈ ಹನಿ ಪೃವೃತ್ತ ಧರ್ಮವನ್ನು ಭೋಧಿಸುವ ಜೀವನ ಸಾರ ಬಡತನ ಕಾಯಿಲೆ ಶಿಕ್ಷಣಾವಕಾಶರಾಹಿತ್ಯ ಪ್ರತಿಕೂಲ ಪರಿಸರ ಎಳೆಹರೆಯದ ಹುಡುಗನನ್ನು ಚಿರ ಅಂಧಕಾರಕ್ಕೆ ತಳ್ಳಲು ಈ ಒಂದೊಂದೇ ಸಾಕು. ಆದರೆ ಅವನ್ನು ಎದುರಿಸಿ ಅನೇಕ ಸಂಧರ್ಭಗಳಲ್ಲಿ ಅನುಕೂಲ ಬಲಗಳಾಗಿ ಮಾರ್ಪಡಿಸಿ ಸೇಡಿಯಾಪು ಎಂಬ ಸಣ್ಣದೋಣಿ ಬಾಳು ಎಂಬ ಕಡಲಯಾನ ತೊಡಗಿಯೇ ಬಿಟ್ಟಿತು. ‘ಈಸಬೇಕು ಇದ್ದು ಜೈಸಬೇಕು !’ ವಿವರಗಳನ್ನು ಇಲ್ಲಿ ಒಂದು ಜೀವಂತ ಕಾದಂಬರಿಯ ಧಾಟಿಯಲ್ಲಿ ಓದಬಹುದು. ವೈದೇಹಿ ಅವರು ಈ ಪುಸ್ತಕವನ್ನು ರಚಿಸಿದ್ದಾರೆ.
Additional information
Author | Vaidehi |
---|---|
Language | Kannada |
Only logged in customers who have purchased this product may leave a review.
Reviews
There are no reviews yet.