ಕೇರಳ ಕಾಂತಾಸಮ್ಮಿತ

Original price was: ₹260.00.Current price is: ₹234.00.

ಕೇರಳ ಕಾಂತಾಸಮ್ಮಿತ:

ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕೃತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು (cultural index) ಗುರುತಿಸಿಕೊಳ್ಳಬೇಕೆನ್ನುವುದಾದರೆ ಆ ಸಂಸ್ಕೃತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಗೆ ಹೋಗಬೇಕಾಗುತ್ತದೆ. ಯಾಕೆಂದರೆ, ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ಕಷ್ಟೋಡಿಯನ್ ಆಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಆಯಾ ಸಂಸ್ಕೃತಿಯ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಮಲಾ ಹೆಮ್ಮಿಗೆಯವರು ತಮ್ಮ ಈ – “ಕೇರಳ ಕಾಂತಾಸಮ್ಮಿತ” ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಡುವ ಮೂಲಕ ಮಲೆಯಾಳೀ ಸಂಸ್ಕೃತಿಯಲ್ಲಿನ `ಸ್ತ್ರೀ ಸಂವೇದನಾ ಸಂಚಯ’(mass of feminine conscience)ವನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.

Additional information

Author

Kamala Hemmige

Language

Kannada

Category

Stories

Reviews

There are no reviews yet.

Only logged in customers who have purchased this product may leave a review.