ಚಂದಾದಾರರು  
   
ಅಂದಿನ ದಿನಗಳಲ್ಲಿ ಪುಸ್ತಕಗಳನ್ನು ಮಾರುವ, ಪ್ರದರ್ಶಿಸುವ ಅಂಗಡಿಗಳಿರಲಿಲ್ಲ. ಅಲ್ಲಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳು ಸಿಗುತ್ತಿದ್ದವೇ ಹೊರತು ಸಾಹಿತ್ಯ ಕೃತಿಗಳನ್ನು ವ್ಯವಸ್ಥಿತವಾಗಿ ಮಾರುವ ಅಂಗಡಿಗಳಿರಲಿಲ್ಲ. ಸಾಹಿತ್ಯ ಕೃತಿಗಳನ್ನು ಮಾತ್ರ ಪ್ರಕಟಿಸುವ ಸಂಕಲ್ಪ ಮಾಡಿದ್ದ ಜಿ.ಬಿ.ಯವರು ಇದಕ್ಕಾಗಿ ಹೊಸ ಯೋಜನೆಯೊಂದನ್ನು ಹಾಕಿಕೊಳ್ಳಬೇಕಾಯಿತು. ಅದೇ ಓದುಗರನ್ನು ಮಾಲೆಯ ಚಂದಾದಾರನ್ನಾಗಿ ಮಾಡಿಕೊಳ್ಳುವುದು, ಪ್ರತಿ ವರ್ಷ ಪುಸ್ತಕಗಳನ್ನು ಮನೆ ಬಾಗಿಲಿಗೆ ತಲುಪಿಸಿ, ಚಂದಾ ಹಣ ಪಡೆಯುವ ಜಿ.ಬಿ.ಯವರ ಉದ್ದೇಶ ತುಂಬ ಯಶ ಕಂಡಿತು. ಉತ್ತಮ ಸಾಹಿತ್ಯ ಮನೆಬಾಗಿಲಿಗೆ ಬರುವಂತಾದದ್ದರಿಂದ ಓದುಗರು ಕೂಡ ಜಿ.ಬಿಯವರ ಸದುದ್ದೇಶಕ್ಕೆ ಸ್ಪಂದಿಸಿದರು. ಪ್ರತಿ ವರ್ಷ ಓದುಗರು ಜಿ.ಬಿ.ಯವರಿಗಾಗಿ ಕಾಯುತ್ತಿದ್ದರು. ಜಿ.ಬಿ. ಲೇಖಕ ಮತ್ತು ಓದುಗರ ನಡುವಿನ ಕೊಂಡಿಯಾದರು. ಉತ್ತಮ ಸಾಹಿತ್ಯ ಮತ್ತು ಉತ್ತಮ ಪ್ರಕಟಣೆ ಎರಡೇ ಜಿ.ಬಿ.ಯವರ ಧ್ಯೇಯವಾಗಿದ್ದವು. ಹೀಗಾಗಿ ಎಂದೂ ಲಾಭ-ಹಾನಿಯ ಲೆಕ್ಕಾಚಾರ ಮಾಡಲೇ ಇಲ್ಲ, ಜಿ.ಬಿ. ಈಗಲೂ ಸುಮಾರು ಒಂದು ಸಾವಿರ ಚಂದಾದಾರರು ಪ್ರತಿ ಆಗಸ್ಟ್‌ದಲ್ಲಿ ಮಾಲೆಯ ಪ್ರಕಟಣೆಗಾಗಿ ಕಾಯುತ್ತಿರುತ್ತಾರೆ. ಐವತ್ತೈದು ವರ್ಷಗಳ ಕಾಲ ಮನೆ-ಮನೆಗೆ, ಊರು-ಊರಿಗೆ ಒಳ್ಳೆಯ ಸಾಹಿತ್ಯ ಹಂಚಲು ಜಿ.ಬಿ. ತಿರುಗಿದ್ದು ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗುವಂಥ ಸಂಗತಿ. ಇಂದಿಗೂ ಅಂದಿನ ಸುಮಾರು ನೂರೈವತ್ತು ಆಜೀವ ಚಂದಾದಾರರು ಗ್ರಂಥಮಾಲೆಯ ಪುಸ್ತಕಗಳನ್ನು ಪಡೆಯುತ್ತಿದ್ದಾರೆ.
 
   

SUBSCRIPTION


The main purpose of the Mala is to publish original Kannada writing and promote Kannada literature. There were no bookshops in Karnataka dealing with general books. Therefore a new method had to be evolved in reaching the reading public. The method that was adopted by the Grantha Mala was to distribute the books directly to individual readers. The subscription system was evolved. Annual subscription was collected and the books were delivered regularly. This method ensured definite readership but also the responsibility of publishing standard literature catering to the reader as well as creating a taste for literature. Many of the old renowned writers shouldered the responsibility of creating good literature and publishing them through Grantha Mala. Mr. G. B. Joshi became a link between the writer and reader. He selected some towns and cities in Karnataka and went personally to distribute books and also to receive the response of the readers which was passed on to the writers. When he realised that getting books according to the uniform quantity of pages was very difficult, he switched over to the fixed number of pages per year instead of number of books per year. Grantha Mala used to publish 1000 pages per year. After some years when its was difficult to get even 1000 pages of quality literature it was reduced to 700 pages per year.