Print Article
 

ಇಂದು

     

ಈ ವರೆಗೆ ಎಲ್ಲವನ್ನು ಗ್ರಂಥಮಾಲೆಯ ಬಗ್ಗೆ ಪ್ರಕಟಣೆಯ ಬಗ್ಗೆ, ಸಾಹಿತಿಗಳ ಬಗ್ಗೆ, ಓದುಗರ ಮತ್ತು ಚಂದಾದಾರರ ಬಗ್ಗೆ ಹೇಳಿದ್ದಾಯಿತು. ಶುದ್ಧ ಸಾಹಿತ್ಯ ಪ್ರಕಟಣೆಗಾಗಿ ಹುಟ್ಟಿಕೊಂಡ ಸಂಸ್ಥೆಯೊಂದು ಎಪ್ಪತ್ತೈದು ವರ್ಷ ಕಳೆದಿರುವುದು ಸಣ್ಣ ಸಾಧನೆಯೇನಲ್ಲ. ಜಿ.ಬಿ.ಯವರು ಇಂದು ನಮ್ಮೊಡನಿಲ್ಲ. ಅಂದಿನ ಸಲಹೆಗಾರರಾಗಿದ್ದ ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ರಂ.ಶ್ರೀ. ಮುಗಳಿ ನಮ್ಮನ್ನಗಲಿದ್ದಾರೆ. ಜಿ.ಬಿ.ಯವರ ಜತೆ ಮೊದಲ ವರ್ಷ ಮಾಲೆಗೆ ನಾಮಕರಣ ಮಾಡಿ ಜತೆಗಿದ್ದ ಬೆಟಗೇರಿ ಕೃಷ್ಣಶರ್ಮಾ, ಪ್ರಹ್ಲಾದ ನರೇಗಲ್, ಗೋವಿಂದ ಚುಳಕಿ ಈಗಿಲ್ಲ. ಸುಮಾರು ಐದು ದಶಕಗಳ ಕಾಲ ಸಲಹೆಗಾರರಾಗಿ, ಭದ್ರ ಬುನಾದಿ ಹಾಕಿದ ಕೀರ್ತಿನಾಥ ಕುರ್ತಕೋಟಿಯವರೂ ನಮ್ಮ ಮಧ್ಯದಲ್ಲಿಲ್ಲ.


ಆದರೂ ಗ್ರಂಥಮಾಲೆಗೆ ಭದ್ರ ಅಡಿಪಾಯವಿದೆ. ಮಗ ರಮಾಕಾಂತ ಜೋಶಿ ತಂದೆಯಂತೆಯೇ ಗ್ರಂಥಮಾಲೆಯ ಜವಾಬ್ದಾರಿಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ತಂದೆಯ ಎಲ್ಲ ಗುಣಗಳನ್ನು ಅವಗತ ಮಾಡಿಕೊಂಡಿದ್ದಾರೆ.


ಜಿ.ಬಿ.ಯವರ ಮೊಮ್ಮಗ, ರಮಾಕಾಂತ ಜೋಶಿಯವರ ಮಗ ಸಮೀರ ಜೋಶಿ ಕೂಡ ಅಜ್ಜ, ತಂದೆಯಂತೆಯೆ ಕಳೆದ ಏಳು ವರ್ಷಗಳಿಂದ ಮನೋಹರ ಗ್ರಂಥಮಾಲೆ ಇನ್ನೂ ಹೆಚ್ಚು ಹೊಸ-ಹೊಸ ಕೆಲಸಗಳನ್ನು ಹಮ್ಮಿಕೊಳ್ಳುವಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಮುದ್ರಣ ತಾಂತ್ರಿಕತೆಯಲ್ಲಿ ಪದವೀಧರರಾದ ಸಮೀರ ಜೋಶಿ ಮನೋಹರ ಗ್ರಂಥಮಾಲೆ ಇನ್ನು ಹೆಚ್ಚು ಪ್ರಸಿದ್ಧಿ ಹೊಂದಿ ಕನ್ನಡಿಗರ ಸೇವೆ ಮಾಡುವಲ್ಲಿ ಸಂಶಯವಿಲ್ಲ ಎಂಬ ಭರವಸೆಯನ್ನು ಈಗಾಗಲೇ ಮೂಡಿಸಿದ್ದಾರೆ.


ಈಗಿನ ಸಾಹಿತ್ಯ ಸಲಹೆಗಾರರಾದ ಗಿರೀಶ ಕಾರ್ನಾಡರು ಉತ್ತಮ ಮೌಲ್ಯದ ಸಾಹಿತ್ಯ ಕೃತಿಗಳು ಮಾಲೆಯಿಂದ ಹೊರಬರುವಂತೆ ಸಲಹೆ - ಸೂಚನೆ ಕೊಡುತ್ತಿದ್ದಾರೆ. ಗಿರೀಶ ಕಾರ್ನಾಡ - ರಮಾಕಾಂತ ಜೋಶಿ ಮತ್ತು ಸಮೀರ ಜೋಶಿಯವರ ನೇತೃತ್ವದಲ್ಲಿ ಗ್ರಂಥಮಾಲೆ ಇನ್ನೂ ಹೆಚ್ಚು ಪ್ರವರ್ಧಮಾನಕ್ಕೆ ಬರುವಲ್ಲಿ ಯಾವ ಸಂಶಯವಿಲ್ಲವೆಂಬ ಭರವಸೆ ಕನ್ನಡಿಗರಿಗೆ ಇದೆ.

     
Padma Bhushan, Jnanapeetha Awardee Shri Girish Karnad is the literary advisor of Manohara Grantha Mala since 2003. He is the guiding spirit in all our activities.
Shri. Girish Karnad
 
 
Dr. Ramakant Joshi, the eldest son of Late G. B. Joshi grew up with Manohara Grantha Mala and assisted his father in the publication work. Later he assumed the entire responsibility of the publication and carried forward the mentor of his father. He is now the Editor-Publisher of Manohara Grantha Mala.
Shri. R.G. Joshi
 
 
 
Shri. Giraddi Govindaraj
   
 
Mr. Sameer Joshi, the son of Dr. Ramakant Joshi and the grandson of Late G. B. Joshi, has taken up the managerial responsibility of Manohara Grantha Mala. He completed his graduation and a course in Printing Technology, has entered the business and is looking after it since 1999.
Shri. Sameer Joshi